Sunday, June 04, 2006

ಮೆಲ್ಲುಸಿರೆ ಸವಿಗಾನ

ಮೆಲ್ಲುಸಿರೇ ಸವಿಗಾನ..
ಎದೆ ಝಲ್ಲೆನೆ ಹೂವಿನ ಬಾಣ..
ಪ್ರಿಯೇ....

ಮನದಾಸೆ ದೂಡಿದ ಬಯಕೆ..
ಕನಸಾಗಿ ಕಾಡುವುದೇಕೆ..
ಮನದಾಸೆ ದೂಡಿದ ಬಯಕೆ..
ಕನಸಾಗಿ ಕಾಡುವುದೇಕೆ..

ಮಧುಮಂಚಕೆ.. ವಿಧಿಹಂಚಿಕೆ..
ಅದಕೇಕೆ ಅಂಜಿಕೆ ಬಾಲೆ..

ವಿರಹಾಗ್ನಿ ನಿನ್ನೆದೆ ಸುಡಲು..
ಬೆಳದಿಂಗಳಾಯಿತು ಬಿಸಿಲು..
ವಿರಹಾಗ್ನಿ ನಿನ್ನೆದೆ ಸುಡಲು..
ಬೆಳದಿಂಗಳಾಯಿತು ಬಿಸಿಲು..

ಹೊರಾಡಿದೆ, ಹಾರಡಿದೆ
ಹಾರೈಸಿ ಪ್ರೇಮದ ಹೊನಲು.

ಈ ದೇಹ ರಸಮಯ ಸದನ
ಈ ನೇಹ ಮಧುಸಂಗ್ರಹಣ
ಈ ದೇಹ ರಸಮಯ ಸದನ
ಈ ನೇಹ ಮಧುಸಂಗ್ರಹಣ

ಚಿರನೂತನ, ರೋಮಾಂಚನ
ದಾಂಪತ್ಯದನುಸಂಧಾನ.
-

ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ

ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ ..
ನಿನಗೆಂದೇ ಬರೆದ ಪ್ರೇಮದ ಒಲೆ..
ಅದ ಓದಲು ಹರಿವುದು ಜೇನಿನ ಹೊಳೆ..

ನಾ ಓದಿದೆ, ಒಲವಿನೋಲೆಯನು..
ಮನಸಾರೆ ನಾ ಮುತ್ತನಿಟ್ಟೆನು..
ಹೆಗಲೇರಿಸಿ ನಿನ್ನ ನೆರಳ ಕಂಡೆನು.. |ನೀ ಮುಡಿದ |

ನಿನ್ನಾಸೆಯ ನೋಟದ ಕಥೆಯೇನು.?.
ಸೆರೆ ಮೀರದ ಯೌವನ ಜತೆಯೇನು..?
ನಿನ್ನಾಸೆಯ ನೋಟದ ಕಥೆಯೇನು.?.
ಸೆರೆ ಮೀರದ ಯೌವನ ಜತೆಯೇನು..?
ಬೆಳದಿಂಗಳ ಹುಣ್ಣಿಮೆ ಮಾತೇನು..?

ಆ ಹುಣ್ಣಿಮೆ ಮಾತನಾಡಿತು..
ನನ್ನ ಕಣ್ಣಲಿ ಮನೆಯ ಮಾಡಿತು..
ಸರಿದೂಗುವ ಬೆಳಕಲಿ ಕೂಡಿ ಆಡಿತು..

ನಾ ಮುಡಿದಾ ಮಲ್ಲಿಗೆ ಹೂವಿನ ಮಾಲೆ ..
ನನಗೆಂದೇ ಬರೆದ ಪ್ರೇಮದ ಒಲೆ..

ನಾ ಮುಡಿದ ಮಲ್ಲಿಗೆ ಹೂವಿನ ಮಾಲೆ.. ನನಗಂದೇ

ಮಧುಮಾಸದಿ ಹಾಡುವ ಕೋಗಿಲೆಯ..
ಆಕಾಶದಿ ತೂಗುವ ಸಿಹಿನುಡಿಯ..
ಮಧುಮಾಸದಿ ಹಾಡುವ ಕೋಗಿಲೆಯ..
ಆಕಾಶದಿ ತೂಗುವ ಸಿಹಿನುಡಿಯ..
ಅನುರಾಗದ ಅಲೆಯಲಿ ತೆಲಿಹೋಗುವೆ..

ತೆಲಾಡುವ ದೋಣೆ ನೀನಾದೆ..
ನೀ ನೋಡುವ ನೋಟಕೆ ಕಣ್ಣಾದೆ..
ಅದು ತೋರಿದ ಊರಿಗೆ ಸಾಗಿ ಹೋಗುವೆ...|ನೀ ಮುಡಿದ |
-

ನೆನಪೆ ಏಕೆ ಕಾಡುವೆ

ನೆನಪೆ.. ಏಕೆ ಕಾಡುವೆ..? ನೆನಪೆ..ಬಿಡದೆ ಕಾಡುವೆ.
ನೆನಪೆ.. ಏಕೆ ಕಾಡುವೆ..?
ಮನಸು ರಸನಿಮಿಷ ನೆನೆದು..
ಮನಸು ರಸನಿಮಿಷ ನೆನೆದು..
ಅದನೇ ಕನವರಿಸಿದೆ...
ನೆನಪೆ ಏಕೆ ಕಾಡುವೆ, ನೆನಪೆ ಬಿಡದೆ ಕಾಡುವೆ.

ಕಡಲ ತೀರದಲಿ ಕೈ ಕೈ ಹಿಡಿದು,
ಅಲೆದಾಡಿದೆವು ಅಲೆಗಳ ಮೇಲೆ..
ಕಡಲ ತೀರದಲಿ ಕೈ ಕೈ ಹಿಡಿದು,
ಅಲೆದಾಡಿದೆವು ಅಲೆಗಳ ಮೇಲೆ..
ಬೆರಳ ಕುಂಚದ ಪ್ರೇಮ ಬರಹಕೆ..
ಬೆರಳ ಕುಂಚದ ಪ್ರೇಮ ಬರಹಕೆ..
ಸಾಲದಾಯಿತು ಮರಳ ಹಾಳೆ.
ನೆನಪೆ.. ಏಕೆ ಕಾಡುವೆ..? ನೆನಪೆ..ಬಿಡದೆ ಕಾಡುವೆ.
ನೆನಪೆ.. ಏಕೆ ಕಾಡುವೆ..?

ನಲ್ಲೆಯ ಹಿಂದೆಯೆ ಬಂದು ಮಂದಿರಕೆ
ಸುತ್ತು ಹಾಕಿದೆ.. ಕೈ ಮುಗಿದೆ..
ನಲ್ಲೆಯ ಹಿಂದೆಯೆ ಬಂದು ಮಂದಿರಕೆ
ಸುತ್ತು ಹಾಕಿದೆ.. ಕೈ ಮುಗಿದೆ..
ಪ್ರೆಯಸಿ ಪ್ರೇಮ ಪ್ರಸಾದಕೆ ಕಾದೆ.
ಪ್ರೆಯಸಿ ಪ್ರೇಮ ಪ್ರಸಾದಕೆ ಕಾದೆ.
ನಾಸ್ತಿಕ ಆಸ್ತಿಕನಾದೆ..
ನೆನಪೆ.. ಏಕೆ ಕಾಡುವೆ..? ನೆನಪೆ..ಬಿಡದೆ ಕಾಡುವೆ.
ನೆನಪೆ.. ಏಕೆ ಕಾಡುವೆ..?

ಎಲ್ಲಿದೆ ಈ ನಗರದ ಒಳಗೆ,
ನಾವಿಬ್ಬರು ಕೂಡದ ತಾಣ..
ಎಲ್ಲಿದೆ ಈ ನಗರದ ಒಳಗೆ,
ನಾವಿಬ್ಬರು ಕೂಡದ ತಾಣ..
ಯಾವ ಕವಿಯೂ ಬರೆಯಲಾರ..
ಯಾವ ಕವಿಯೂ ಬರೆಯಲಾರ..
ನಮ್ಮ ಮಿಲನದ ಮಧುರ ಕವನ
ನೆನಪೆ.. ಏಕೆ ಕಾಡುವೆ..? ನೆನಪೆ..ಬಿಡದೆ ಕಾಡುವೆ.
ನೆನಪೆ.. ಏಕೆ ಕಾಡುವೆ..?
-

ಬಾ ಚಕೋರಿ .. ಬಾ ಚಕೋರಿ

ಬಾ ಚಕೋರಿ.. ಬಾ ಚಕೋರಿ..

ಬಾ ಚಕೋರಿ.. ಬಾ ಚಕೋರಿ.. ಚಂದ್ರ ಮಂಚಕೆ
ಬಾ ಚಕೋರಿ.. ಬಾ ಚಕೋರಿ.. ಚಂದ್ರ ಮಂಚಕೆ
ಜೊನ್ನ ಜೇನಿಗೆ ಬಾಯಾರಿದೆ.. ಜೊನ್ನ ಜೇನಿಗೆ ಬಾಯಾರಿದೆ
ಚಕೋರ ಚುಂಬನ

ಚಂದ್ರಿಕಾ ಮಧು ಪಾನ ಮತ್ತ.. ನೀಲ ಕುಂಭ ಪಯೋದವಿತ್ತ
ಚಂದ್ರಿಕಾ ಮಧು ಪಾನ ಮತ್ತ.. ನೀಲ ಕುಂಭ ಪಯೋದವಿತ್ತ
ವಕ್ಷ ಪರಿರಂಬನ ನಿಮಿತ್ತ ನಿರಾವಲಂಬನಾ..

ಚರಣ ನೂಪುರ ಕಿಂಕಿಣಿಕ್ವಣ.. ಮದನ ಸಿಂಗಿಣಿ ಜನಿತನೀಕ್ವಣ
ಚರಣ ನೂಪುರ ಕಿಂಕಿಣಿಕ್ವಣ.. ಮದನ ಸಿಂಗಿಣಿ ಜನಿತನೀಕ್ವಣ
ಚಿತ್ತರಂಜನಿ ತಳುವದೀಕ್ಷಣ.. ಚಿತ್ತರಂಜನಿ ತಳುವದೀಕ್ಷಣ
ಚಂದ್ರಮಂಚಕೆ ಬಾ ಚಕೋರಿ..

ತೆರೆಯ ಚಿಮ್ಮಿಸಿ.. ನೊರೆಯ ಹೊಮ್ಮಿಸಿ, ಕ್ಷೀರಸಾಗರದಲ್ಲಿ ತೇಲುವ..
ತೆರೆಯ ಚಿಮ್ಮಿಸಿ.. ನೊರೆಯ ಹೊಮ್ಮಿಸಿ, ಕ್ಷೀರಸಾಗರದಲ್ಲಿ ತೇಲುವ..
ಬಾಗು ಚಂದ್ರನ ತೂಗುಮಂಚಕೆ, ಬಾ ಚಕೋರಿ.. ಬಾ ಚಕೋರಿ..
ಎದೆಯಾರಿದೆ.. ಬಾಯಾರಿದೆ.. ಚಕೋರ ಚುಂಬನ.

ನಿಕುಂಜ ರತಿವನ ಮದನ ಯಾಗಕೆ.. ಅನಂಗ ರಕ್ತಿಯ ಬಿಂಬ ಭೋಗಕೆ
ಕಾಂಕ್ಷಿಯಾಗಿದೆ ನಗ್ನ ಯೋಗಕೆ..
ಇಕ್ಷು ಮಂಚರ ಸಾಗ್ನಿ ಪಕ್ಷಿಯ.. ಅಚಂಚು ಚುಂಬನ..
ಬಾ ಚಕೋರಿ.. ಬಾ ಚಕೋರಿ.. ಚಂದ್ರ ಮಂಚಕೆ
-

ಏಳೆನ್ನ ಮನದನ್ನೆ

ಏಳೆನ್ನ ಮನದನ್ನೆ, ಏಳು ಮುದ್ದಿನ ಕನ್ನೆ
ಏಳು ಮಂಗಳದಾಯಿ, ಉಷೆಯ ಗೆಳತಿ
ಏಳು ಮುತ್ತಿನ ಚಂಡೆ, ಏಳು ಮಲ್ಲಿಗೆ ದಂಡೆ
ಏಳು ಬಣ್ಣದ ಬಿಲ್ಲೆ, ಮಾಟಗಾತಿ

ಏಳೆನ್ನ ಕಲ್ಯಾಣಿ, ಏಳು ಬಾವದ ರಾಣಿ
ನೋಡು ಮೂಡಲದಲ್ಲಿ ರಾಗ ಮಿಲನ
ಏಳೆನ್ನ ಕಲ್ಯಾಣಿ, ಏಳು ಬಾವದ ರಾಣಿ
ನೋಡು ಮೂಡಲದಲ್ಲಿ ರಾಗ ಮಿಲನ
ಮರದುದಿಯ ತೋರಣದಿ ಹೊಂಬಿಸಿಲ ಬಾವುಟವು
ಗಾಳಿವಟ್ಟೆಯಲದರ ಚಲನ ವಲನ

ಮಂಜಿನರಳೆಯ ಹಿಂಜಿ, ತೋರುತಿಹ ನೇಸರನು
ಹಿಮಮಣಿಯ ದರ್ಪಣದಿ ತನ್ನ ಕಂಡು
ಮಂಜಿನರಳೆಯ ಹಿಂಜಿ, ತೋರುತಿಹ ನೇಸರನು
ಹಿಮಮಣಿಯ ದರ್ಪಣದಿ ತನ್ನ ಕಂಡು
ಮಿರುಗಿ ಹೊಗರೆರಿಹನು ಏಳೆನ್ನ ಹೊಂಗೆಳತಿ
ಮೊಗದ ಜವನಿಕೆ ತೆರೆದು ನಗೆಯ ನೀಡು

ಲಲಿತ ಶ್ರಿಂಗಾರ ರಸಪೂರ್ಣೆ ಚಂದಿರವರ್ಣೆ
ದ್ರಷ್ಟಿ ತೆಗೆಯಲು ಒಂದು ಮುತ್ತನಿಡುವೆ
ಲಲಿತ ಶ್ರಿಂಗಾರ ರಸಪೂರ್ಣೆ ಚಂದಿರವರ್ಣೆ
ದ್ರಷ್ಟಿ ತೆಗೆಯಲು ಒಂದು ಮುತ್ತನಿಡುವೆ
ನಿನ್ನ ಸಕ್ಕರೆ ನಿದ್ದೆ ಸವಿಗನಸ ಕಥೆ ಹೇಳು
ಒಂದು ಚಣ ಜಗವನ್ನೆ ಮರೆತುಬಿಡುವೆ

ಏಳೆನ್ನ ಮನದನ್ನೆ, ಏಳು ಮುದ್ದಿನ ಕನ್ನೆ
ಏಳು ಮಂಗಳದಾಯಿ, ಉಷೆಯ ಗೆಳತಿ
ಏಳು ಮುತ್ತಿನ ಚಂಡೆ, ಏಳು ಮಲ್ಲಿಗೆ ದಂಡೆ
ಏಳು ಬಣ್ಣದ ಬಿಲ್ಲೆ, ಮಾಟಗಾತಿ
-