Sunday, January 04, 2009

ಊರೆಲ್ಲ ಕೂಗಿ ಹೇಳುವೆ

ಊರೆಲ್ಲ ಕೂಗಿ ಹೇಳುವೆ, ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತಾ, ಓ ಸುಂದರ ಸ್ನೇಹಿತ
ಊರೆಲ್ಲ ಕೂಗಿ ಹೇಳುವೆ...

ರಾತ್ರಿಯೆಲ್ಲಾ ಕೂತು ಆರಾಧಿಸಿ, ಒಂಟಿ ಜೀವವೀಗ ತಂಟೆ ಮಾಡಿದೆ
ಬೆನ್ನ ಹಿಂದೆ ಎಂದು ನೀ ಮೆಲ್ಲಗೆ ಬಂದು ನಿಂತ ಭಾಸ ಉಂಟು ಮಾಡಿದೆ
ಈ ಪ್ರೇಮದ ರೋಮಾಂಚನ ಸ್ವೀಕಾರ ಮಾಡಬೇಕು ನೀನಾಗಿಯೇ
ಊರೆಲ್ಲ ಕೂಗಿ ಹೇಳುವೆ...

ಸಾವಿರಾರು ಮಾತು ನೀನಾಡುವೆ, ನನ್ನ ಮೌನ ಚೂರೂ ನೀ ಕೇಳದೆ
ಹಾವ ಭಾವ ನೂರು ನೀ ತೋರುವೆ, ಕಣ್ಣಿನಲ್ಲಿ ಕಣ್ಣು ನೀನೂರದೆ
ಆಮೋದದ ಈ ಸೋಜಿಗ ಆಕಾರ ತಾಳಬೇಕು ತಾನಾಗಿಯೇ
ಊರೆಲ್ಲ ಕೂಗಿ ಹೇಳುವೆ....
.

ಮಾಯವಾಗಿದೆ ಮನಸು..

ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ
ಮೊಹದಲ್ಲಿ ಬೀಳುವ ಮಧುರವಾದ ಬಾವನೆ
ಈಗ ತಾನೆ ಬಂದಿದೆ ನೀಡದೇ ಸೂಚನೆ

ತುಂಬಿ ಹೋಯಿತೀಗಲೆ ನನ್ನ ದಿನಚರಿ
ಎಲ್ಲ ಪುಟದಲೂ ಅವಳದೇ ವೈಖರಿ
ಅವಳ ನಿಲುವು ಕನ್ನಡಿ ಪುಣ್ಯ ಮಾಡಿದೆ
ರೂಪ ತಾಳಿ ನಿಂತಿದೆ ನನ್ನದೇ ಕಲ್ಪನೆ

ನನ್ನ ಹಾಡಿನಲ್ಲಿದೆ ಅವಳ ಸಂಗತಿ
ಜಾಹಿರಾಗಲಿ ಜೀವದಾ ಮಾಹಿತಿ
ಎಲ್ಲೇ ಹೊರಟು ನಿಂತರೂ ಅಲ್ಲೇ ತಲುಪುವೆ
ಜಾಸ್ತಿ ಹೇಳಲಾರೆನು ಖಾಸಗಿ ಯೋಚನೆ
.