Sunday, January 04, 2009

ಮಾಯವಾಗಿದೆ ಮನಸು..

ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ
ಮೊಹದಲ್ಲಿ ಬೀಳುವ ಮಧುರವಾದ ಬಾವನೆ
ಈಗ ತಾನೆ ಬಂದಿದೆ ನೀಡದೇ ಸೂಚನೆ

ತುಂಬಿ ಹೋಯಿತೀಗಲೆ ನನ್ನ ದಿನಚರಿ
ಎಲ್ಲ ಪುಟದಲೂ ಅವಳದೇ ವೈಖರಿ
ಅವಳ ನಿಲುವು ಕನ್ನಡಿ ಪುಣ್ಯ ಮಾಡಿದೆ
ರೂಪ ತಾಳಿ ನಿಂತಿದೆ ನನ್ನದೇ ಕಲ್ಪನೆ

ನನ್ನ ಹಾಡಿನಲ್ಲಿದೆ ಅವಳ ಸಂಗತಿ
ಜಾಹಿರಾಗಲಿ ಜೀವದಾ ಮಾಹಿತಿ
ಎಲ್ಲೇ ಹೊರಟು ನಿಂತರೂ ಅಲ್ಲೇ ತಲುಪುವೆ
ಜಾಸ್ತಿ ಹೇಳಲಾರೆನು ಖಾಸಗಿ ಯೋಚನೆ
.

Monday, October 13, 2008

ಮರೆಯದ ನೆನಪನು

ಮರೆಯದ ನೆನಪನು ಎದೆಯಲ್ಲಿ ತಂದೆ ನೀನು
ಮರೆಯದ ನೆನಪನು ಎದೆಯಲ್ಲಿ ತಂದೆ ನೀನು
ನಿನಗಾಗಿ ಅರಸಿ ಬಂದೆ ನಿನಗಾಗಿ ಅರಸಿ ಬಂದೆ
ನೀ ಎಲ್ಲೋ ಅಲ್ಲೆ ನಾನು

ಕನಸಲ್ಲು ನಿನ್ನ ರೂಪ ಈ ಮನದಲ್ಲಿ ತರಲು ಪಾಪ
ಕಣ್ಣಲ್ಲಿ ಮುಚ್ಚಿ ನಿನ್ನ ನಾ ಕರೆದೊಯ್ವ ಆಸೆ ಚಿನ್ನ
ನಗುವೆಂಬ ಬಲೆಯ ಬೀಸಿ ನಾ ನುಡಿಯಲ್ಲಿ ಜೇನ ಸೂಸಿ
ಸೆರೆಹಿಡಿವೆ ನಾ ಬಿಡದೆ ನಿನ್ನ

ಮಿಂಚಂತೆ ಸುಳಿದು ನೀನು ಮರೆಯಾಗಿ ಹೋದರೇನು
ಸುಳಿವನ್ನು ತಿಳಿಯಬಲ್ಲ ಹೊಸ ಮೋಡಿ ಬಲ್ಲೆ ನಾನು
ಬಾಳಲ್ಲಿ ಬಿಡಿಸದಂತ ಎಂದೇಂದು ಮುರಿಯದಂತ
ಬಂಧನದಿ ಹಿಡಿವೆ ನಿನ್ನ