Saturday, January 17, 2009

ಈ ಸಂಜೆ ಯಾಕಾಗಿದೆ

ಈ ಸಂಜೆ ಯಾಕಾಗಿದೆ, ನೀನಿಲ್ಲದೆ
ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ, ನೀನಿಲ್ಲದೆ,
ಈ ಸಂತೆ ಸಾಕಾಗಿದೆ
ಏಕಾಂತವೇ ಆಲಾಪವು, ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ,
ಒಹೊಹೊ.. ಈ ಮೌನ ಬಿಸಿಯಾಗಿದೆ

ಈ ಸಂಜೆ ಯಾಕಾಗಿದೆ ನೀನಿಲ್ಲದೆ,
ಈ ಸಂಜೆ ಯಾಕಾಗಿದೆ.

ಈ ನೋವಿಗೆ ಕಿಡೀ ಸೋಕಿಸಿ ಮಜಾ ನೋಡಿದೆ ತಾರಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನಾಕ್ಷಣ
ನೆನಪೆಲ್ಲವು ಹೂವಾಗಿದೆ, ಮೈ ಎಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ,
ಈ ಜೀವ ಕಸಿಯಾಗಿದೆ

ನೀನಿಲ್ಲದೆ ಆ ಚಂದಿರ, ಈ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ, ಬೆಳದಿಂಗಳು ಅಸುನೀಗಿದೆ
ಆಕಾಶದಿ ಕಲೆಯಾಗಿದೆ, ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ
ಈ ಗಾಯ ಹಸಿಯಾಗಿದೆ

ಈ ಸಂಜೆ ಯಾಕಾಗಿದೆ, ನೀನಿಲ್ಲದೆ
ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ, ನೀನಿಲ್ಲದೆ,
ಈ ಸಂತೆ ಸಾಕಾಗಿದೆ
ಏಕಾಂತವೇ ಆಲಾಪವು, ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ,
ಒಹೊಹೊ.. ಈ ಮೌನ ಬಿಸಿಯಾಗಿದೆ


ಈ ಸಂಜೆ ಯಾಕಾಗಿದೆ ನೀನಿಲ್ಲದೆ,
ಈ ಸಂಜೆ ಯಾಕಾಗಿದೆ.

Friday, January 16, 2009

ಈ ಬಂಧನ

ಈ ಬಂಧನ, ಜನುಮ ಜನುಮದಾ ಅನುಬಂಧನ
ಈ ಬಂಧನ, ಜನುಮ ಜನುಮದಾ ಅನುಬಂಧನ
ಈ ಪ್ರೇಮ ಸಂಗೀತ, ಸಂತೋಷ ಸಂಕೇತ |2|

ಈ ಬಂಧನ ನನ್ನ ನಿನ್ನ ಮಿಲನ ತಂದ ಹೊಸಜೀವನ
ಈ ಬಂಧನ ಎದೆಯ ತುಂಬಿ ಬಂದ ಒಂದು ಸುಖ ಬಾವನಾ
ನಿನ್ನ ಮಡಿಲಲ್ಲಿ ನಾನು ಮಗುವಾದೆ
ನಿನ್ನ ಉಸಿರಲ್ಲಿ ನಾನು ಉಸಿರಾದೆ
ಪ್ರೇಮದ ಸೌರಭ ಚೆಲ್ಲುವ ಚಂದನ

ಈ ದಾರಿಯು ಹೂವ ರಾಸಿ ಹಾಸಿ ನಮಗೆ ಶುಭ ಕೋರಿದೆ
ಆ ದೂರದ ಒಲವ ಮನೆಯು ಕೈಯ ಬೀಸಿ ಬಾ ಎಂದಿದೆ
ಹೆಜ್ಜೆ ಜೊತೆಯಾಗಿ ನಿನ್ನ ನೆರಳಾಗಿ ಪ್ರೀತಿ ಬೆಳಕಾಗಿ
ದಾರಿ ಹಾಯಾಗಿ ಸೇರುವ ಸುಂದರ ಪ್ರೇಮದಾ ಮಂದಿರ

ಈ ಬಂಧನ, ಜನುಮ ಜನುಮದಾ ಅನುಬಂಧನ

ಜೊತೆಯಲಿ ಜೊತೆಜೊತೆಯಲಿ

ಜೊತೆಯಲಿ ಜೊತೆಜೊತೆಯಲಿ
ಇರುವೆನು ಹೀಗೆ ಎಂದು..
ಜೊತೆಯಲಿ ಜೊತೆಜೊತೆಯಲಿ
ಇರುವೆನು ಹೀಗೆ ಎಂದು..

ಜೊತೆಯಲಿ ಜೊತೆಜೊತೆಯಲಿ
ಇರುವೆನು ಹೀಗೆ ಎಂದು..
ಹೊಸ ಹರುಷವ ತರುವೆನು ಇನ್ನು ಎಂದು
ಒಹೋ .. ಎಂತ ಮಾತಾಡಿದೆ
ಇಂದು ನೀ, ಎಂತ ಮಾತಾಡಿದೆ,
ನನ್ನ ಮನಸಿನ ಬಾವನೆ ನೀನೇ ಹೇಳಿದೆ

ಪ್ರೀತಿ ಎಂದರೇನು ಎಂದು ಈಗ ಅರಿತೆನು
ಪ್ರೀತಿ ಎಂದರೇನು ಎಂದು ಈಗ ಅರಿತೆನು
ಸವಿ ನುಡಿಯಲಿ ತನು ಅರಳಿತು
ಸವಿಗನಸಲಿ ಮನ ಕುಣಿಯಿತು
ಒಲವಿನ ಈ ಮಾತಿಗೆ, ಕರೆದಿಹ ಜೇನಾಟಕೆ
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ

ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ
ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ
ಹಾರಡುವ ಅರಗಿಣಿಗಳ ಮಾತಾಡಿಸಿ ಮುದ್ದಾಡುವ
ಕಾಮನ ಬಿಲ್ಲೆರುವ, ಜಾರುತ ನಾವಾಡುವ
ಹಗಲು ಇರುಳು ಒಂದಾಗಿ ಹಾಡುವ

ಜೊತೆಯಲಿ ಜೊತೆಜೊತೆಯಲಿ
ಇರುವೆನು ಹೀಗೆ ಎಂದು..
ಹೊಸ ಹರುಷವ ತರುವೆನು ಇನ್ನು ಎಂದು
ಒಹೋ .. ಎಂತ ಮಾತಾಡಿದೆ
ಇಂದು ನೀ, ಎಂತ ಮಾತಾಡಿದೆ,
ನನ್ನ ಮನಸಿನ ಬಾವನೆ ನೀನೇ ಹೇಳಿದೆ

ಜೊತೆಯಲಿ ಜೊತೆಜೊತೆಯಲಿ
ಇರುವೆನು ಹೀಗೆ ಎಂದು..

Sunday, January 11, 2009

ಧರಣಿ ಮಂಡಲ ಮಧ್ಯದೊಳಗೆ


ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊ
ಳಿರುವ ಕಾಳಿಂಗನೆಂಬ ಗೊಲ್ಲನ
ಪರಿಯ ನಾನಿಂತು ಪೇಳ್ವೆನು

ಉದಯಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮುದದಿ ತಿಲಕವ ಹಣೆಯೊಳಿಟ್ಟು
ಚದುರ ಶಿಖೆಯನು ಹಾಕಿದ

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುವ ಗೊಲ್ಲಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೇ ಗೌರಿ ಬಾರೇ
ತುಂಗಭದ್ರೆ ತಾಯಿ ಬಾರೇ
ಕಾಮಧೇನು ನೀನು ಬಾರೆಂದು
ಪ್ರೇಮದಿಂದಲಿ ಕರೆದನು

ಗೊಲ್ಲ ಕರೆದ ಧ್ವನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂತು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ


ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಭುದಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಸಿಡಿದು ರೋಷದಿ ಮೊರೆಯುತಾ ಹುಲಿ
ಘುಡುಘುಡಿಸಿ ಭೋರಿಡುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚೆದುರಿ ಹೋದವು ಹಸುಗಳು

ಪುಣ್ಯಕೋಟಿ ಎಂಬ ಗೋವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿ ಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆ ಎಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು


ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ನೋಡಿ ಹೋಗುವೆ
ನೆಂದು ಬಂದೆನು ದೊಡ್ಡಿಗೆ

ಅಮ್ಮ ನೀನು ಸಾಯಲೇಕೆ
ನಮ್ಮ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಅಮ್ಮನಿಗೆ ಕರು ಹೇಳಲು

ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟ ಕಡೆಗಿದು ಖಂಡಿತ

ಆರ ಮೊಲೆಯನು ಕುಡಿಯಲಮ್ಮ
ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರು ನಮಗೆ ಹಿತವರು

ಅಮ್ಮಗಳಿರಾ ಅಪ್ಪಗಳಿರಾ
ನಮ್ಮ ತಾಯೊಡಹುಟ್ಟುಗಳಿರಾ
ನಿಮ್ಮ ಕಂದನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಕಟ್ಟಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗಬೇಡ
ದುಷ್ಟ ವ್ಯಾಘ್ರನು ಹೊಂಚುತಿರುವನು
ನಟ್ಟ ನಡುವಿರು ಕಂದನೆ

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಸೇರುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ


ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿ ರಕ್ತವಿದೆಕೋ
ಚಂಡವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ನಾನೇನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು.

Tuesday, January 06, 2009

ಕುಣಿದು ಕುಣಿದು ಬಾರೆ

ಕುಣಿದು ಕುಣಿದು ಬಾರೆ, ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ, ಮಳೆಯ ಹನಿಯ ಮಾಲೆ
ಜೀವಕೆ ಜೀವ ತಂದವಳೆ,
ಜೀವಕ್ಕಿಂತ ಸನಿಹ ಬಾರೆ,
ಒಲವೇ ವಿಸ್ಮಯ, ಒಲವೇ ವಿಸ್ಮಯ
ನಿನ್ನ ಪ್ರೇಮ ರೂಪ ಕಂಡು ನಾನು ತನ್ಮಯ

ಹುಚ್ಚು ಹುಡುಗ ನೀನು, ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ
ಬಾನಿಗೇರಿ ಹಾರುವ ಬಾರೊ
ಒಲವೇ ವಿಸ್ಮಯ

ಇರುಳಲ್ಲಿ ನೀನೆಲ್ಲೊ ಮೈಮುರಿದರೆ
ನನಗಿಲ್ಲಿ ನವಿರಾದ ಹೂ ಕಂಪನ
ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ
ಮಾತಿಲ್ಲ ಕಥೆಯಿಲ್ಲ ಬರಿ ರೋಮಾಂಚನ

ನಿನ್ನ ಕಣ್ಣ ತುಂಬ, ಇರಲಿ ನನ್ನ ಬಿಂಬ
ಹೂವಿಗೆ ಬಣ್ಣ ತಂದವನೆ
ಪರಿಮಳದಲ್ಲಿ ಅರಳುವ ಬಾರೋ
ಒಲವೇ ವಿಸ್ಮಯ

ಒಲವೇ ನೀನೊಲಿದ ಕ್ಷಣದಿಂದಲೆ
ಈ ಭೂಮಿ ಈ ಬಾನು ಹೊಸದಾಗಿದೆ
ಖುಶಿಯಿಂದ ಈ ಮನವೆಲ್ಲ ಹೂವಾಗಿದೆ
ಬೇರೆನು ಬೇಕಿಲ್ಲ ನೀನಲ್ಲದೆ

ಕುಣಿದು ಕುಣಿದು ಬಾರೆ, ಒಲಿದು ಒಲಿದು ಬಾರೆ
.

ಮಾತಿನಲ್ಲಿ ಹೇಳಲಾರೆನು

ಮಾತಿನಲ್ಲಿ ಹೇಳಲಾರೆನು, ರೇಖೆಯಲ್ಲಿ ಗೀಚಲಾರೆನು
ಆದರೂನೂ ಹಾಡದೇನೇ ಉಳಿಯಲಾರೆನು
ಅಂತ ರೂಪಸಿ ನನ್ನ ಪ್ರೇಯಸಿ, ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ, ದಯಮಾಡಿ ವಾಸಿ ಮಾಡಬೇಡಿ
ಅಂತ ರೂಪಸಿ ನನ್ನ ಪ್ರೇಯಸಿ, ಒಮ್ಮೆ ಅವಳಿಗೆ ನನ್ನ ತೋರಿಸಿ

ಕಣ್ಣಲ್ಲಿದೆ ಆ ಕಣ್ಣಲ್ಲಿದೆ, ಹೊಂಬೆಳಕಿನ ನವ ನೀಲಾಂಜನ
ಇನೆಲ್ಲಿದೆ ಆಹಾ ಇನ್ನೆಲ್ಲಿದೆ, ಹೂಮನಸಿನ ಆ ಮಧುಗುಂಜನ
ಬೇರೆ ಏನು ಕಾಣಲಾರೆ, ಯಾರ ನಾನು ದೂರಲಾರೆ
ಸಾಕು ಇನ್ನು ದೂರವನ್ನು ತಾಳಲಾರೆನು
ನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿ
ಅಂತ ರೂಪಸಿ ನನ್ನ ಪ್ರೇಯಸಿ, ಒಮ್ಮೆ ಅವಳಿಗೆ ನನ್ನ ತೋರಿಸಿ

ನಗೆಯಲ್ಲಿದೆ ಆ ಬಗೆಯಲ್ಲಿದೆ, ಬಗೆಹರಿಯದ ಆ ಅವಲೋಕನ
ನಡೆಯಲ್ಲಿದೆ ಆ ನುಡಿಯಲ್ಲಿದೆ, ತಲೆಕೆಡಿಸುವ ಆ ಆಮಂತ್ರಣ
ಕನಸಿಗಿಂತ ಚಂದವಾಗಿ, ಅಳಿಸದಂತ ಗಂಧವಾಗಿ
ಮೊದಲ ಬಾರಿ ಕಂದ ಕ್ಷಣವೇ ಬಂಧಿಯಾದೆನು
ಹೋದೆ ನಾನು ಕಳೆದು, ದಯಮಾಡಿ ಪತ್ತೆ ಮಾಡಬೇಡಿ
ಅಂತ ರೂಪಸಿ ನನ್ನ ಪ್ರೇಯಸಿ, ಒಮ್ಮೆ ಅವಳಿಗೆ ನನ್ನ ತೋರಿಸಿ

ಮಾತಿನಲ್ಲಿ ಹೇಳಲಾರೆನು..
.

ಮರೆಯದ ನೆನಪನು

ಮರೆಯದ ನೆನಪನು..
ಎದೆಯಲ್ಲಿ ತಂದೆ ನೀನು..
ನಿನಗಾಗಿ ಅರಸಿ ಬಂದೆ.. ನೀ ಎಲ್ಲೋ ಅಲ್ಲೆ ನಾನು..

ಕನಸಲ್ಲು ನಿನ್ನ ರೂಪ..
ಈ ಮನದಲ್ಲಿ ತರಲು ಪಾಪ..
ಕಣ್ನಲ್ಲಿ ಮುಚ್ಚಿ ನಿನ್ನ..
ನಾ ಕರೆದೊಯ್ವ ಆಸೆ ಚಿನ್ನ..
ನಗುವೆಂಬ ಬಲೆಯ ಬೀಸಿ.. ನಾ ನುಡಿಯಲ್ಲಿ ಜೇನ ಸೂಸಿ..
ಸೆರೆ ಹಿಡಿವೆ ನಾ ಬಿಡದೆ ನಿನ್ನ..

ಮಿಂಚಂತೆ ಸುಳಿದು ನೀನು..
ಮರೆಯಾಗಿ ಹೊದರೇನು..
ಸುಳಿವನ್ನು ತಿಳಿವ ಬಲ್ಲ..
ಹೊಸ ಮೋಡಿ ಬಲ್ಲೆ ನಾನು..
ಬಾಳಲ್ಲಿ ಬಿಡಿಸದಂತ.. ಎಂದೆಂದು ಮುರಿಯದಂತ..
ಬಂಧನದಿ ಹಿಡಿವೆ ನಾನು..

ಮರೆಯದ ನೆನಪನು..
ಎದೆಯಲ್ಲಿ ತಂದೆ ನೀನು..
ನಿನಗಾಗಿ ಅರಸಿ ಬಂದೆ.. ನೀ ಎಲ್ಲೋ ಅಲ್ಲೆ ನಾನು..
.

ಅನಿಸುತಿದೆ ಯಾಕೋ ಇಂದು

ಅನಿಸುತಿದೆ ಯಾಕೋ ಇಂದು... ನೀನೇನೆ ನನ್ನವಳೆಂದು...
ಮಾಯದ ಲೋಕದಿಂದ... ನನಗಾಗಿ ಬಂದವಳೆಂದು...
ಆಹಾ.. ಎಂಥಾ.. ಮಧುರ ಯಾತನೆ...
ಕೊಲ್ಲು ಹುಡುಗಿಯೊಮ್ಮೆ ನನ್ನ... ಹಾಗೇ ಸುಮ್ಮನೆ...

ಸುರಿಯುವ ಸೋನೆಯು.. ಸೂಸಿದೆ ನಿನ್ನದೆ ಪರಿಮಳ...
ಇನ್ನು ಯಾರ ಕನಸಲೂ ನೀನು ಹೋದರೆ ತಳಮಳ..
ಪೂರ್ಣ ಚಂದಿರ ರಜಾ ಹಾಕಿದ, ನಿನ್ನಯ ಮೊಗವನು ಕಂಡ ಕ್ಷಣ..
ನಾ ಕೈದಿ, ನೀನೇ ಸೆರಮನೆ..
ತಬ್ಬಿ ನನ್ನ ಅಪ್ಪಿಕೊ ಒಮ್ಮೆ.. ಹಾಗೇ ಸುಮ್ಮನೆ...

ತುಟಿಗಳ ಹೂವಲಿ.. ಆಡದ ಮಾತಿನ ಸಿಹಿಯಿದೆ...
ಮನಸಿನ ಪುಟದಲಿ ಕೇವಲ ನಿನ್ನಯ ಸವಿಯಿದೆ..
ಹಣೆಯಲಿ ಬರೆಯದ ನಿನ್ನ ಹೆಸರ.. ಹೃದಯದಿ ನಾನೇ ಕೊರೆದಿರುವೆ..
ನಿನಗುಂಟೆ ಇದರ ಕಲ್ಪನೆ.. ನನ್ನ ಹೆಸರ ಕೂಗೇ ಒಮ್ಮೆ.. ಹಾಗೇ ಸುಮ್ಮನೆ...
.

ನಿನ್ನಿಂದಲೇ

ನಿನ್ನಿಂದಲೇ ನಿನ್ನಿಂದಲೇ
ಕನಸೊಂದು ಶುರುವಾಗಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲಿ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವಾ ಹಂಬಲಾ
ನಾ ನಿಂತಲ್ಲೇ ಹಾಡಾದೆ ನಿನ್ನಿಂದಲೇ

ಇರುಳೆಲ್ಲಾ ಜ್ವರದಂತೆ ಕಾಡಿ
ಈಗ ಹಾಯಾಗಿ ನಿಂತಿರುವೆ ಸರಿಯೇನು?
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೋ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ
ನಿನ್ನಿಂದ ತಡೆಬಂದಿದೇ

ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನಾ
ಸೊಂಪಾದ ನಗುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನಾ ನೋಟ
ನನಗೇನೋ ಅಂದಂತೆ ಅನುಮಾನ
ಕಣ್ಣಿಂದಲೇ ಸದ್ದಿಲ್ಲದೇ ಮುದ್ದಾದ ಕರೆ ಬಂದಿದೇ
ನಿನ್ನಿಂದಲೇ..
.

ನೀನಿಲ್ಲದೆ ನನಗೇನಿದೆ

ನೀನಿಲ್ಲದೆ ನನಗೇನಿದೆ
ಕನಸೆಲ್ಲ ಕಣ್ಣಲ್ಲೇ ಕಲೆಯಾಗಿದೆ
ಮನಸೆಲ್ಲೇ ನಿನ್ನಲ್ಲೆ ನೆಲೆಯಾಗಿದೆ

ನಿನಗಾಗಿ ಕಾದು ಕಾದು
ಪರಿತಪಿಸಿ ನೊಂದೆ ನಾನು
ಕಹಿಯಾದ ವಿರಹದ ನೋವು
ಹಗಲಿರುಳು ತಂದೆ ನೀನು
ಎದೆಯಾಸೆ ಏನು ಎಂದು
ನೀ ಕಾಣದಾದೆ
ನಿಶೆಯೊಂದೆ ನನ್ನಲ್ಲಿ
ನೀ ತುಂಬಿದೆ
ಭರವಸೆಯ ನಿನ್ನಿಂದ
ನಾ ಬಯಸಿದೆ

ನೀನಿಲ್ಲದೇ

ಒಲವೆಂಬ ಕಿರಣ ಬೀರಿ
ಒಳಗಿರುವ ಕಣ್ಣ ತೆರೆಸಿ
ಒಣಗಿರುವ ಎದೆ ಬಿಲದಲ್ಲಿ
ಭರವಸೆಯ ಜೀವ ಹಣಿಸಿ
ಸೆರೆಯಿಂದ ಬಿಡಿಸಿ ನನ್ನ
ಆತಂಕ ನೀಗು..
ಹೊಸ ಜೀವ ನಿನ್ನಿಂದ
ನಾ ತಾಳುವೆ..
ಹೊಸ ಲೋಕ ನಿನ್ನಿಂದ
ನಾ ಕಾಣುವೆ..

ನೀನಿಲ್ಲದೇ..
.

ನಧೀಮ್ ಧೀಮ್ ತನ

ನಧೀಮ್ ಧೀಮ್ ತನ ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ

ನಧೀಮ್ ಧೀಮ್ ತನ ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ
ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದ೦ಗ
ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ
ಈ ಕಣ್ಣಿನ ಕವನ ಓದೊ ಓ ಹುಡುಗ

ನಧೀಮ್ ಧೀಮ್ ತನ ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ
ಮೊದಲ ಹೆಜ್ಜೆಗೆ ಎನೊ ಕಂಪನ ಏನೀ ರೋಮಾಂಚನ

ಪ್ರೇಮದ ಸರಿಗಮ ಸ್ವರ ತಾಳದ ಕೊಳದಲ್ಲಿ
ಆಡುತ ತೇಲಾಡುತ ಜ್ವರವೇರಿಸು ಮಳೆಯಲ್ಲಿ
ಒಂದೂರಲ್ಲಿ ರಾಜ ರಾಣಿ ನೂರು ಮಕ್ಕಳ ಹೆತ್ತ ಕಥೆಗೆ
ದುಂಡು ಮುಖದ ರಾಜಕುಮಾರ ಕೋಟೆ ದಾಟಿ ಬಂದ ಕಥೆಗೆ
ನಾಯಕ ನೀನೇ... ಆ ಚಂದಮಾಮ ಕಥೆಗೆ ನಾಯಕಿ ನಾ

ನಧೀಮ್ ಧೀಮ್ ತನ ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ
ಮೊದಲ ಹೆಜ್ಜೆಗೆ ಎನೊ ಕಂಪನ ಏನೀ ರೋಮಾಂಚನ

ಸುಮ್ಮನೆ ತಿಳಿ ತಿಳಿ ನಾನಾಡದ ಪದಗಳನು
ಸೋಲುವೆ ಪ್ರತಿ ಕ್ಷಣ ನನ್ನ ಮನದಲೆ ನಾನು
ನಿದ್ದೆ ಬರದ ಕಣ್ಣಾ ಮೇಲೆ ಕೈಯಾ ಮುಗಿವೆ ಚುಂಬಿಸು ನೀ
ನಾನೆ ನಾಚಿ ನಡುಗೊ ವೇಳೆ ಮಲ್ಲೆ ಹೂವ ಮುಡಿಸೊ ಒಮ್ಮೆ
ನಾನು ಭೂಮಿ ಆವರಿಸು ಸುರಿವ ಮಳೆಯಂತೆ ನನ್ನ

ನಧೀಮ್ ಧೀಮ್ ತನ ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ
ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದ೦ಗ
ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ
ಈ ಕಣ್ಣಿನ ಕವನ ಓದೊ ಓ ಹುಡುಗ
.

ಮಿಂಚಾಗಿ ನೀನು ಬರಲು

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ
ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ

ನಾ ನಿನ್ನ ಕನಸಿಗೆ ಚಂದಾದಾರನು
ಚಂದಾ ಬಾಕಿ ನೀಡಲು ಬಂದೇ ಬರುವೆನು
ನಾ ನೇರ ಹೃದಯದ ವರದಿಗಾರನು
ನಿನ್ನ ಕಂಡ ಕ್ಷಣದಲೇ ಮಾತೇ ಮರೆವೆನು
ಕ್ಷಮಿಸು ನೀ ಕಿನ್ನರಿ ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ

ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕನ್ನ ಕೊರೆದು ದೋಚಿ ಕೊಂಡ ನೆನಪುಗಳಿಗೆ ಪಾಲುದಾರ
ನನ್ನ ಈ ವೇದನೆ ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ
.

ಕವಿತೆ

ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ
ಕವಿತೆ ಕವಿತೆ ನೀನೇಕೆ ರಾಗದಲಿ ಬೇರೆತೆ
ನನ್ನೆದೆಯಾ ಗೂಡಲ್ಲಿ ಕವಿತೆಗಳ ಸಂತೆ
ಓ ಒಲವೆ ನೀ ತಂದ ಹಾಡಿಗೆ ನಾ ಸೋತೆ

ಅವಳು ಬರಲು ಮನದಲ್ಲಿ ಪದಗಳದೆ ಚಿಲುಮೆ
ಮನದ ಕಡಲಾ ದಡ ದಾಟೋ ಅಲೆಗಳಲೂ ನಲುಮೆ
ಹೊಮ್ಮುತಿದೆ ರಾಗದಲಿ ಸ್ವರ ಮೀರೋ ತಿಮಿರು
ಚಿಮ್ಮುತಿದೆ ಸುಳ್ಳಾಡುವ ಕವಿಯಾದ ಪೊಗರು

ಮುಗಿಲಾ ಹೆಗಲಾ ಮೇಲೇರಿ ತೇಲುತಿದೆ ಹೃದಯಾ
ಮಾಡಿಲಾ ಹುಡುಕಿ ಎದೆ ಬಾಗಿಲಿಗೆ ಬಂತೋ ಪ್ರಣಯ
ಉನ್ಮಾದ ತಾನಾಗಿ ಹಾಡಾಗೊ ಸಮಯಾ
ಏಕಾಂತ ಘಲ್ಲನ್ನು ಮಾಡುವುದೋ ಕವಿಯಾ
.

ಜೀವ ಕಳೆವ ಅಮೃತಕೆ

ಒಂದೇ ಸಮನೇ ನಿಟ್ಟುಸಿರು, ಪಿಸುಗುಡುವ ತೀರದ ಮೌನ
ತುಂಬಿ ತುಳುಕೊ ಕಂಗಳಲಿ, ಕರಗುತಿದೆ ಕನಸಿನ ಬಣ್ಣ
ಎದೆಯಾ ಜೊಪಡಿಯಾ ಒಳಗೆ, ಕಾಳಿಡದೆ ಕುಲುಕಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ, ಮಳೆಬಿಲ್ಲಿನಂತೆ ನೋವು
ಕೊನೆಯಿರದ ಏಕಾಂತವೆ ಒಲವು

ಒಂದೇ ಸಮನೇ ನಿಟ್ಟುಸಿರು, ಪಿಸುಗುಡುವ ತೀರದ ಮೌನ
ತುಂಬಿ ತುಳುಕೊ ಕಂಗಳಲಿ, ಕರಗುತಿದೆ ಕನಸಿನ ಬಣ್ಣ

ಜೀವ ಕಳೆವ ಅಮೃತಕೆ, ಒಲವೆಂದು ಹೆಸರಿಡಬಹುದೆ
ಪ್ರಾಣ ಉಳಿಸೋ ಕಾಯಿಲೆಗೆ, ಪ್ರೀತಿ ಎಂದೆನ್ನಬಹುದೆ
ಹೊಂಗನಸಾ ಚಾದರದಲ್ಲಿ, ಮುಳ್ಳಿನ ಹಾಸಿಗೆಯಲಿ ಮಲಗಿ
ಯಾತನೆಗೆ ಮುಗುಳ್ನಗು ಬರಲು, ಕಣ್ಣಾ ಹನಿ ಸುಮ್ಮನೆ ಒಳಗೆ
ಅವಳನ್ನೆ ಜಪಿಸುವೆದೆ ಒಲವೆ

ಜೀವ ಕಳೆವ ಅಮೃತಕೆ,ಒಲವೆಂದು ಹೆಸರಿಡಬಹುದೆ
ಪ್ರಾಣ ಉಳಿಸೋ ಕಾಯಿಲೆಗೆ, ಪ್ರೀತಿ ಎಂದೆನ್ನಬಹುದೆ

ನಾಲ್ಕು ಪದದ ಗೀತೆಯಲಿ, ಮಿಡಿತಗಳ ಬಣ್ಣಿಸಬಹುದೆ
ಮೂರು ಸ್ವರದ ಹಾಡಿನಲಿ, ಹೃದಯವನು ಹರಿಬಿಡಬಹುದೆ
ಹುಕ್ಕಿಬರುವಾ ಕಂಠದಲಿ, ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವಾ ಎದೆಯೊಳಗೆ, ನಗುತಲಿದೆ ಮಡಿದಾ ಕವನ
ಒಂಟಿತನದ ಗುರುವೇ ಒಲವೇ
.

ಹೇ ಹುಡುಗಿ

ಹೇ ಹುಡುಗಿ, ಹೇ ಹುಡುಗಿ,
ನೀ ಹುಚ್ಚು ಹಿಡಿಸಬೇಡಾ ಕಣೆ
ಹೇ ದನಿಯೇ, ಮಾರ್ದನಿಯೇ,
ನೀ ಚುಚ್ಚಿ ಕೊಲ್ಲಬೇಡಾ ಕಣೆ
ನಿಜಾ ಹೇಳೆಯಾ, ನಿಜಾ ಹೇಳೆಯಾ,
ಯಾರೆ ನೀ ... ಯಾರೆ ನೀ ...
ಆ ಚಂದಮಾಮ ಕಥೆಯ ಮೋಹಿನಿ,
ಅದಾವ ಜನ್ಮ ನಂಟು ನಂಗೆ ನೀ
ಗುಟ್ಟಾಗಿ ಹರೆವ ಗುಪ್ತಗಾಮಿನಿ,
ಕಾಣದೂರ ಮಾಟಗಾತಿ ನೀ |

ಮೋಡ ಬಸಿರು ಕಟ್ಟಿ,
ಮಳೆಯು ಭೂಮಿ ಮುಟ್ಟಿ, ಪೈರು
ಬಾವ ಹೃದಯ ತಟ್ಟಿ,
ಒಲುಮೆ ಚಿಲುಮೆ ಹುಟ್ಟಿ, ಪ್ರೀತಿ
ಹಾಗೆ ಹುಟ್ಟಲಾರದು,
ಹುಟ್ಟು ಗುಟ್ಟು ತಿಳಿಸಿ ಹೇಳದು
ಕಣ್ಣಮುಚ್ಚೇ ಆಟ ಆಡಬೇಡವೆ,
ಕಣ್ಣ ಮುಂದೆ ಬಾರೆ, ಕಣ್ಣು ತೆರೆಸುವೆ

ನಿತ್ಯ ಆತ್ಮಹತ್ಯೆ,
ಮಾಡಿಕೊಳ್ಳುತಾನೆ ಸೂರ್ಯ
ಯಾರೋ ಕಾಡುತಾರೊ,
ಏನೋ ಅವನ ಎದೆಯ ಗಾಯ
ಹೆಣ್ಣು ಮಾಯೆ ಅಂದರು,
ನೊಂದು ಬೆಂದು ಹೋದ ಮುಗ್ಧರು
ಆ ಮಾಯ ಜಿಂಕೆ ಹೇಗೆ ಹಿಡಿಯಲಿ,
ಆ ಶಬ್ದವೇ ನೀ, ಎಲ್ಲಿ ಕಲಿಯಲಿ
.

Monday, January 05, 2009

ಸಿಹಿ ಗಾಳಿ ಸಿಹಿ ಗಾಳಿ

ಸಿಹಿ ಗಾಳಿ ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು, ಇನ್ಯಾಕೆ ಪ್ರೀತಿಯಲಿ

ಸಿಹಿ ಗಾಳಿ ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು, ಇನ್ಯಾಕೆ ಪ್ರೀತಿಯಲಿ
ಲೋಕವೊಂದೆ ಸಾಕು ದಿನವು ಬೆರೆಯಲೇ ಬೇಕು
ಪ್ರೇಮ ಅಮೃತದ ಗೀತೆ ಬರೆಯೋಣ ಬಾ

ಬಾನಾಡಿಗೊಂದು ಸವಿ ಮಾತು ಕಲಿಸುವ
ಆ ವೀಣೆಗೊಂದು ಎದೆ ರಾಗ ತಿಳಿಸುವ
ನದಿಗಳಿಗೆ ಅಲೆಗಳಿಗೆ ಕುಣಿವ ಮನಸ್ಸು ಕೊಡುವ
ಅರಳುತಿರೊ ಹೂಗಳಿಗೆ ಒಲವ ಸುಧೆಯ ಕೊಡುವ
ಬಾಳಿನ ಅರ್ಥವೇ ಪ್ರೇಮವೆಂಬುದಲ್ಲವೇ
ಪ್ರೇಮವೇ ಇಲ್ಲದೆ ನಾನು ನೀನು ಯಾಕೆ

ಸಿಹಿ ಗಾಳಿ ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು, ಇನ್ಯಾಕೆ ಪ್ರೀತಿಯಲಿ
.

ಆ ದಿನಗಳು

ಆ ದಿನಗಳು, ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ ಇದೆ ನನ್ನ ಬಿಡದೆ
ಗಾಳಿಯಲ್ಲಿ ಪ್ರೇಮಗೀತೆ ಬರೆದ ಸಂದೇಶವು
ಬಳಸಿ ಬಂದು ಹೇಳಲಿಲ್ಲವೇ ನನ್ನ ಈ ಸ್ನೇಹವು
ಪ್ರೀತಿಯ ಈ ಹಾದಿಯನ್ನು ಏಕೆ ಬಿಟ್ಟು ಹೋದೆ

ದಿನದಿನ ಮುಖವನು ನೋಡಿ ಹೊಗಳುವ ಮಾತೆಲ್ಲಿ
ಮುನಿಯುತ ಜಗಳವ ಆಡಿ ನಟಿಸಿದ ನಗುವೆಲ್ಲಿ
ನನ್ನ ಕಲ್ಪನೆ ಎಲ್ಲೊ ನಿನ್ನ ಹುಡುಕಿ ಹೊಯ್ತು
ಆ ಶಿಲ್ಪದಲಿ ಕಂಡು ಮನಸ್ಸು ಶಾಂತವಾಯ್ತು
ನೀನೆಲ್ಲೊ ನಾನೆಲ್ಲೊ ಇನ್ನು ತಾಳೆ ವಿರಹ ನೋವ

ಆ ದಿನಗಳು, ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ ಇದೆ ನನ್ನ ಬಿಡದೆ
.

ಏನಾಗಲಿ ಮುಂದೆ ಸಾಗು ನೀ

ಏನಾಗಲಿ ಮುಂದೆ ಸಾಗು ನೀ
ಬಯಸಿದ್ದೆಲ್ಲ ಸಿಗದು ಬಾಳಲಿ
ನನ್ನಾಣೆ ನನ್ನ ಮಾತು ಸುಳ್ಳಲ್ಲ

ಚಲಿಸುವಾ ಕಾಲವು ಕಲಿಸುವ ಪಾಠವ
ಮರೆಯಬೇಡ ನೀ ತುಂಬಿಕೊ ಮನದಲಿ
ಇಂದಿಗೊ ನಾಳೆಗೊ ಒಂದಿನಾ ಬಾಳಲಿ
ಗೆಲ್ಲುವಂತ ಸ್ಪೂರ್ತಿ ದಾರಿ ದೀಪ
ನಿನಗೆ ಆ ಅನುಭವ

ಕರುಣೆಗೆ ಬೆಲೆಯಿದೆ, ಪುಣ್ಯಕೆ ಫಲವಿದೆ
ದಯವ ತೋರುವ ಮಣ್ಣಿನ ಗುಣವಿದೆ
ಸಾವಿನ ಸುಳಿಯಲಿ ಸಿಲುಕಿದ ಜೀವಕೆ
ಜೀವ ನೀಡುವ ಹೃದಯವೇ ದೈವವು

ಹರಸಿದ ಕೈಗಳು ನಮ್ಮನು ಬೆಳೆಸುತ
ವಿಧಿಯ ಬರಹವಾಗಿ ಮೌನದಲ್ಲಿ
ನಮ್ಮನು ಕಾಯುತ
ಪ್ರತಿಫಲ ಬಯಸದೆ ತೋರಿದ ಕರುಣೆಯು
ಮೊದಲು ಮನುಜನೆಂಬ ನೆಮ್ಮದಿ ತರುವದು

ಏನಾಗಲಿ ಮುಂದೆ ಸಾಗು ನೀ
ಪ್ರೀತಿಗಾಗೆ ಬದುಕು ಬಾಳಲಿ
ನನ್ನಾಣೆ ಪ್ರೀತಿ ಎಂದು ಸುಳ್ಳಲ್ಲ..

ನಿನ್ನ ನೋಡಲೆಂತೊ

ನಿನ್ನ ನೋಡಲೆಂತೊ, ಮಾತನಾಡಲೆಂತೊ
ಮನಸ ಕೇಳಲೆಂತೊ, ಪ್ರೀತಿ ಹೇಳಲೆಂತೊ
ಆಹಾ.. ಒಂತರಾ ತರ
ಹೇಳಲೊಂತರಾ ತರ.. ಕೇಳಲೊಂತರಾ ತರ..

ಕಣ್ಣಿಗೇನೂ ಕಾಣದೆ, ಸ್ಪರ್ಶವೇನೂ ಇಲ್ಲದೆ
ಏನು ನನ್ನ ಕಾಡಿದೆ, ಏನು ಅರ್ಥವಾಗದೆ
ಹಗಲು ರಾತ್ರಿ ನಿನ್ನದೇ, ನೂರು ನೆನಪು ಮೂಡಿದೆ
ನನ್ನಲೇನೊ ಆಗಿದೆ, ಹೇಳಲೇನು ಆಗದೆ
ಮನಸು ಮಾಯವೆಂತೊ, ಮಧುರ ಬಾವವೆಂತೊ
ಪಯಣ ಎಲ್ಲಿಗೆಂತೊ, ನಯನ ಸೇರಲೆಂತೊ
ಮಿಲನವಾಗಲೆಂತೊ, ಗಮನ ಎಲ್ಲೊ ಎಂತೊ
ಆಹಾ.. ಒಂತರಾ ತರ
ಹೇಳಲೊಂತರಾ ತರ.. ಕೇಳಲೊಂತರಾ ತರ..

ಮೆಲ್ಲ ಮೆಲ್ಲ ಮೆಲ್ಲುವ, ಸನ್ನೆಯಲ್ಲಿ ಕೊಲ್ಲುವ
ಸದ್ದೆ ಇರದ ಉತ್ಸವ ಪ್ರೀತಿಯೊಂದೆ ಅಲ್ಲವ
ಘಲ್ಲು ಘಲ್ಲು ಎನ್ನುವ ಹೃದಯ ಗೆಜ್ಜೆ ನಾದವ
ಪ್ರೀತಿ ತಂದ ರಾಗವ, ತಾಳಲೆಂತು ಬಾವವ
ಹೃದಯದಲ್ಲಿ ಎಂತೊ, ಉದಯವಾಯಿತೆಂತೊ
ಸನಿಹವಾಗಲೆಂತೊ, ಕನಸ ಕಾಣಲೆಂತೊ
ಹರುಷ ಎನೋ ಎಂತೊ, ಸೊಗಸ ಹೇಳಲೆಂತೊ
ಆಹಾ.. ಒಂತರಾ ತರ
ಹೇಳಲೊಂತರಾ ತರ.. ಕೇಳಲೊಂತರಾ ತರ..
.

ನನ್ನ ಜೀವ ನೀನು

ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು
ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು
ನಿನ್ನ ಕಣ್ಣ ಕಂಬನಿ ನನ್ನಾಣೆ ನೋಡಲಾರೆನು

ಬಾಡಿ ಹೋದ ಹೂವಿನಂತೆ ಏಕೆ ಹೀಗೆ ಕಾಣುವೆ
ನೋಡುವಾ ಆಸೆಗೆ ನೋಡುವ ಆಸೆಗೆ
ನಿನ್ನ ಕಂಗಳಾಗುವೆ
ಹರುಷ ತುಂಬಿ ನಗಿಸುವೆ

ಯಾರ ಶಾಪ ಬಂದಿತೋ
ಯಾರ ಕೋಪ ಸೋಕಿತೋ
ನಿನ್ನನು, ನಾನಿಂದು ನಿನ್ನನು ನೋಡೋ ಆಸೆ ಮಾಡೋದೇನೋ
ಚಿಂತೆ ಏಕೆ ನಾನಿಲ್ಲವೇ?

ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು
.

Sunday, January 04, 2009

ಸಲುಗೆ ಸಲುಗೆ

ಸಲುಗೆ ಸಲುಗೆ, ಸ್ನೇಹ ಸಲುಗೆ, ಒಲವ ಕಡೆಗೆ ನೆಡೆವ ಘಳಿಗೆ
ಎದೆಯೊಳಗೊಂದು ಮೌನ, ಬಿಡದೇ ಕಾಡೊ ಗಾನ
ಪುಲಕಗಳಲ್ಲೇ ಸ್ನಾನ, ನೆನಪುಗಳಲ್ಲೇ ಧ್ಯಾನ
ಮನಸ್ಸು ಬೇಕಂತ ಜಾರಿ, ಹೃದಯ ಇನ್ನೆಲ್ಲೊ ಹಾರಿ
ಆಹಾ ಮೊದಮೊದಲ ಸಾರಿ, ಈ ಅಚ್ಚರಿ..

ಸೂಚನೇನೆ ಸಿಗಲಿಲ್ಲ ನನಗಂತೂ, ಅಷ್ಟರಲ್ಲೇ ಸೋಜಿಗ ನೆಡೆದಿತ್ತು
ಒಲವಿದು ಶುರುವಾಯ್ತು, ದಿನಚರಿ ಬದಲಾಯ್ತು
ಪ್ರತಿ ನಿಮಿಷ ಎಣಿಸಿ ಬದುಕೋದು, ಪರದೇಸಿಯಂತೆ ಅಲೆಯೋದು
ಇದನ್ನೆಲ್ಲ ಹೇಗೆ ಹೇಳೊದು ಕಾಣೆ, ನನ್ನಾಣೆ ..

ಯಾರೊ ನಂಗೆ ಕೇಳಿದರು ದಾರಿನಾ, ನಾನೆ ಕಳೆದು ಹೋಗಿರುವೆ ಅಂದೆನಾ
ಎಡವಿದ ಕಲ್ಲಿನಲು ಅವಳನೆ ಕಾಣುವೆ ನಾ
ಹೋರಾಡಿ ಅಂದು ಬಾಲ್ಯದಲಿ, ಹಿಡಿದಂತ ಮೊದಲ ಚಿಟ್ಟೆಯಲಿ
ಪಡೆದಂತ ಸಂತಸ ಇಂದು ಮತ್ತೆ ನನಗೆಲ್ಲಿ.
.

ಮೊದಮೊದಲ ಮಾತು

ಮೊದಮೊದಲ ಮಾತು ಚಂದ ಕನವರಿಸೊ ಪ್ರೀತಿಗೆ
ಮೊದಮೊದಲ ಮೌನ ಚಂದ ಚಡಪಡಿಸೋ ಪ್ರೇಮಿಗೆ
ಒಪ್ಪಿಗೆ ಕೇಳದೆ ಪ್ರೀತಿಯು ಬಂದಿದೆ
ಸಮ್ಮತಿ ನೀಡದೆ ನನ್ನೆದೆ ಕಾಡಿದೆ
ಸದ್ದನು ಮಾಡದ ಮನಸಿನ ಉತ್ಸವ
ಹೇಳಲು ಆಗದ ಒಂತರಾ ಅನುಭವ

ಉತ್ತರ ದಕ್ಷಿಣ ಎಲ್ಲವು ಮರೆತೆ ನಾ
ಪ್ರೀತಿಯು ಹುಟ್ಟುವ ಸೂಚನೆ ಹೀಗೆನಾ
ಒಮ್ಮೆ ಹಾಗೆ ಒಮ್ಮೆ ಹೀಗೆ ಎನಿದೇನೊ ಆಗಿದೆ
ಅಗೋದೆಲ್ಲ ಆಗುವಾಗ ಏನು ಗೊತ್ತೆ ಆಗದೆ
ಹೇಳದೆ ಕೇಳದೆ ಪ್ರೀತಿಯು ಮೂಡಿದೆ...

ನನ್ನೆದೆ ಗೂಡಲಿ ನಿನ್ನದೆ ಚಿಲಿಪಿಲಿ
ನಿನ್ನದೆ ನೆನಪಲಿ ಆದೆ ನಾ ಗಲಿಬಿಲಿ
ಹೊತ್ತುಗೊತ್ತು ಇಲ್ಲದೆ ನೀ ಏಕೆ ಹೀಗೆ ಕಾಡಿವೆ
ಸುತ್ತಮುತ್ತ ನೋಡುವಾಗ ಎಲ್ಲ ನೀನೆ ಕಾಣುವೆ
ಹೇಳಲು ಕೇಳಲು ಪ್ರೀತಿಯು ಕಾಣದು...
.

ಕಣ್ ಕಣ್ಣ ಸಲಿಗೆ

ಕಣ್ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ
ನೀ ಇನ್ನು ನನಗೆ ನನಗೆ ನನ್ನನಗೆ
ತರತರ ಹೊಸತರ ಒಲವಿನ ಅವಸರ
ಹೃದಯಾನೆ ಜೋಕಾಲಿ

ಋತು ಏಳು ಭೂಮಿಯ ಮೇಲೆ,
ಪ್ರಣಯಾನೆ ಎಂಟನೆ ಒಲೆ ತಿಳಿ ತಿಳಿ ಪ್ರೇಮ
ಇರೋದಂತು ನಾಲ್ಕೇ ವೇದ ಪ್ರೀತಿ ತಾನೆ ಪಂಚಮ ವೇದ..
ನಿಜ ನಿಜ ಪ್ರೇಮ, ನಾನು ನಿನ್ನಲಿ ಮೆಚ್ಚಿದ ಅಂಶವೇ ಪ್ರೀತಿ
ನೀನು ನನ್ನನು ಒಪ್ಪದೇ ಹೋದರೆ ಏನೋ ಭೀತಿ

ಸಹಿ ಮಾಡು ನನ್ನೆದೆ ತುಂಬಾ,
ನೀನೆ ಅದರ ತುಂಬ ತುಂಬಾ, ನಂಬು ನನ್ನ ನಲ್ಲೆ
ಒಂದೆ ಒಂದು ಮಾತು ಕೇಳು, ಎಲ್ಲ ಜನುಮ ನನ್ನನೆ ಆಳು,
ನೀನೆ ನನ್ನ ಬಾಳು, ಯಾವ ತುದಿಯಲಿ, ಇದ್ದರೂ ಭೂಮಿಯ ಮೇಲೆ
ನಾನು ನಿನ್ನನೇ ಕಾಯುವೆ, ಪ್ರೀತಿಸೆ..
ಪ್ರೀತಿ ಮಾಡೆ..
.

ನಾನೇನು ನಂಬೊದಿಲ್ಲ

ನಾನೇನು ನಂಬೊದಿಲ್ಲ ಪ್ರೀತಿ ಗೀತಿಯಾ..
ಸರಿ, ಇನ್ನೊಮ್ಮೆ ಕೇಳು ನನ್ನ ಪ್ರೇಮ ಗೀತೆಯ..

ತಾನಗಿಯೆ ಮನ ಹಾರಡಿದೆ, ನೀ ಕೇಳು ಒಲವಿನ ಇಂಚರ..
ಪ್ರೀತಿಯಲಿ ಸೋತು ನೋಡು ಪ್ರೀತಿಯಲಿ ಮಾತೆ ಹಾಡು
ಪ್ರೀತಿಯಲಿ ಜಗವೆಲ್ಲ ಜಗಮಗ ಸುಂದರ
ಪ್ರೀತಿಯಿದು ಸುಳ್ಳೆ ಶೊಕಿ.. ಪ್ರೀತಿಯಲಿ ನೋವೇ ಬಾಕಿ
ಪ್ರೀತಿ ಇದು ಹಿತವಾಗಿ ಸೆಳೆಯುವ ಪಂಜರ

ಪಿಸುನೋಟದಿಂದಲೆ ಒಲೆ ಬರೆವ ಅಲೆಮಾರಿ ಸಂತೋಷ ಈ ಪ್ರೀತಿಗೆ
ಮರುಳಾಗಿ ಹಿಂದೇನೆ ಓಡಿಬರುವ ಹಟಮಾರಿ ಆವೇಷ ಈ ಪ್ರೀತಿಗೆ
ಈ ಕಾಯುವ ಖುಶಿ ಬೇರೆ ಇದೆ, ಮನಸೀಗ ಕನಸಿನ ಆಗರ
ಪ್ರೀತಿ ಬರಿ ಆಪಾದನೆ, ಗಾಯಗಳ ಸಂಪಾದನೆ
ಪ್ರೀತಿ ಇದು ನೂರೆಂಟು ಸುಳಿಗಳ ಸಾಗರ

ನೋವನ್ನು ನಲಿವನ್ನು ಲೆಕ್ಕ ಇಡುವ ಬೇಕಾರು ತಕರಾರು ಈ ಪ್ರೇಮವು..
ಏಕಾಂತದಲ್ಲೂನು ಪಕ್ಕ ಇರುವ ನೆನಪಿನ ತವರೂರು ಈ ಪ್ರೇಮವು..
ಇದ್ದಂತೆಯೆ ಮನ ಹಾಯಗಿದೆ ಬೇಕೇನು ವಿರಹದ ಬೇಸರ
ಪ್ರೀತಿಯಲಿ ಎಲ್ಲ ಮಾಫು.. ಪ್ರೀತಿಯಲಿ ಹೃದಯ ಸಾಫು
ಪ್ರೀತಿಸುವ ಕಣ್ಣಲ್ಲಿ ನಗುವನು ಚಂದಿರ..
.

ಊರೆಲ್ಲ ಕೂಗಿ ಹೇಳುವೆ

ಊರೆಲ್ಲ ಕೂಗಿ ಹೇಳುವೆ, ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತಾ, ಓ ಸುಂದರ ಸ್ನೇಹಿತ
ಊರೆಲ್ಲ ಕೂಗಿ ಹೇಳುವೆ...

ರಾತ್ರಿಯೆಲ್ಲಾ ಕೂತು ಆರಾಧಿಸಿ, ಒಂಟಿ ಜೀವವೀಗ ತಂಟೆ ಮಾಡಿದೆ
ಬೆನ್ನ ಹಿಂದೆ ಎಂದು ನೀ ಮೆಲ್ಲಗೆ ಬಂದು ನಿಂತ ಭಾಸ ಉಂಟು ಮಾಡಿದೆ
ಈ ಪ್ರೇಮದ ರೋಮಾಂಚನ ಸ್ವೀಕಾರ ಮಾಡಬೇಕು ನೀನಾಗಿಯೇ
ಊರೆಲ್ಲ ಕೂಗಿ ಹೇಳುವೆ...

ಸಾವಿರಾರು ಮಾತು ನೀನಾಡುವೆ, ನನ್ನ ಮೌನ ಚೂರೂ ನೀ ಕೇಳದೆ
ಹಾವ ಭಾವ ನೂರು ನೀ ತೋರುವೆ, ಕಣ್ಣಿನಲ್ಲಿ ಕಣ್ಣು ನೀನೂರದೆ
ಆಮೋದದ ಈ ಸೋಜಿಗ ಆಕಾರ ತಾಳಬೇಕು ತಾನಾಗಿಯೇ
ಊರೆಲ್ಲ ಕೂಗಿ ಹೇಳುವೆ....
.

ಮಾಯವಾಗಿದೆ ಮನಸು..

ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ
ಮೊಹದಲ್ಲಿ ಬೀಳುವ ಮಧುರವಾದ ಬಾವನೆ
ಈಗ ತಾನೆ ಬಂದಿದೆ ನೀಡದೇ ಸೂಚನೆ

ತುಂಬಿ ಹೋಯಿತೀಗಲೆ ನನ್ನ ದಿನಚರಿ
ಎಲ್ಲ ಪುಟದಲೂ ಅವಳದೇ ವೈಖರಿ
ಅವಳ ನಿಲುವು ಕನ್ನಡಿ ಪುಣ್ಯ ಮಾಡಿದೆ
ರೂಪ ತಾಳಿ ನಿಂತಿದೆ ನನ್ನದೇ ಕಲ್ಪನೆ

ನನ್ನ ಹಾಡಿನಲ್ಲಿದೆ ಅವಳ ಸಂಗತಿ
ಜಾಹಿರಾಗಲಿ ಜೀವದಾ ಮಾಹಿತಿ
ಎಲ್ಲೇ ಹೊರಟು ನಿಂತರೂ ಅಲ್ಲೇ ತಲುಪುವೆ
ಜಾಸ್ತಿ ಹೇಳಲಾರೆನು ಖಾಸಗಿ ಯೋಚನೆ
.