Thursday, May 14, 2009

ಆಕಾಶ ನೀನೆ - ಅಂಬಾರಿ

ಆಕಾಶ ನೀನೆ, ನೀಡೊಂದು ಗೂಡು
ಬಂತೀಗ ಪ್ರೀತಿ ಹಾರಿ
ತಂಗಾಳಿ ನೀನೆ, ನೀಡೊಂದು ಹಾಡು
ಕಂಡೀತು ಕಾಲುದಾರಿ
ಒಂದಾದ ಜೀವ ಹೂವಾಗುವಂತೆ
ಎಂದೂ ಕಾಪಾಡಲಿ, ಪ್ರೀತಿಯ ಅಂಬಾರಿ

ಕಣ್ಣಿನಲ್ಲಿ ಕಣ್ಣಿರೆ,
ಲೋಕವೆಲ್ಲ ಹೂ ಹಂದರ
ಬಾವವೊಂದೆ ಆಗಿರೆ,
ಬೇಕೆ ಬೇರೆ ಬಾಷಾಂತರ
ಎದೆಯಿಂದ ಹೊರಹೋಗೊ ಉಸಿರೆಲ್ಲ ಕನಸಾಗಲಿ
ಈ ಪ್ರೀತಿ ಜೊತೆಯಲ್ಲಿ ಒಂದೊಂದು ನನಸಾಗಲಿ
ಕೊನೆಯಿಲ್ಲದ ಕುಶಲೋಪರಿ, ಪ್ರೀತಿಯ ಅಂಬಾರಿ

ಕಾಣದಂತ ಹೊಸ್ತಿಲು
ದೂರದಿಂದ ಬಾ ಎಂದಿದೆ
ಪೆದ್ದು ಮುದ್ದು ಜೋಡಿಗೆ ಸಿಕ್ಕ ಪ್ರೀತಿ ಸೊಗಸಾಗಿದೆ
ಆ ಸೂರ್ಯ ಸರಿದಾಗ ಈ ಪ್ರೇಮ ರೋಮಾಂಚನ
ಮುಸ್ಸಂಜೆ ಕವಿದಾಗ ಈ ಪ್ರೇಮ ನೀಲಾಂಜನ
ಮುಂದರಿಯುವ ಕಾದಂಬರಿ, ಪ್ರೀತಿಯ ಅಂಬಾರಿ

Saturday, January 17, 2009

ಈ ಸಂಜೆ ಯಾಕಾಗಿದೆ

ಈ ಸಂಜೆ ಯಾಕಾಗಿದೆ, ನೀನಿಲ್ಲದೆ
ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ, ನೀನಿಲ್ಲದೆ,
ಈ ಸಂತೆ ಸಾಕಾಗಿದೆ
ಏಕಾಂತವೇ ಆಲಾಪವು, ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ,
ಒಹೊಹೊ.. ಈ ಮೌನ ಬಿಸಿಯಾಗಿದೆ

ಈ ಸಂಜೆ ಯಾಕಾಗಿದೆ ನೀನಿಲ್ಲದೆ,
ಈ ಸಂಜೆ ಯಾಕಾಗಿದೆ.

ಈ ನೋವಿಗೆ ಕಿಡೀ ಸೋಕಿಸಿ ಮಜಾ ನೋಡಿದೆ ತಾರಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನಾಕ್ಷಣ
ನೆನಪೆಲ್ಲವು ಹೂವಾಗಿದೆ, ಮೈ ಎಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ,
ಈ ಜೀವ ಕಸಿಯಾಗಿದೆ

ನೀನಿಲ್ಲದೆ ಆ ಚಂದಿರ, ಈ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ, ಬೆಳದಿಂಗಳು ಅಸುನೀಗಿದೆ
ಆಕಾಶದಿ ಕಲೆಯಾಗಿದೆ, ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ
ಈ ಗಾಯ ಹಸಿಯಾಗಿದೆ

ಈ ಸಂಜೆ ಯಾಕಾಗಿದೆ, ನೀನಿಲ್ಲದೆ
ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ, ನೀನಿಲ್ಲದೆ,
ಈ ಸಂತೆ ಸಾಕಾಗಿದೆ
ಏಕಾಂತವೇ ಆಲಾಪವು, ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ,
ಒಹೊಹೊ.. ಈ ಮೌನ ಬಿಸಿಯಾಗಿದೆ


ಈ ಸಂಜೆ ಯಾಕಾಗಿದೆ ನೀನಿಲ್ಲದೆ,
ಈ ಸಂಜೆ ಯಾಕಾಗಿದೆ.